ಅಬ್ರಕಡಬ್ರ
	
ಇದು ಅನಿಷ್ಟ ಸಂಭವಿಸದಂತೆ ರಕ್ಷಾಯಂತ್ರವಾಗಿ ಅಥವಾ ತಾಯಿತಿಯಾಗಿ ಧರಿಸಿಕೊಳ್ಳುತ್ತಿದ್ದ ಶಿಲೆಗಳ ಮೇಲೆ ಕೆತ್ತಲಾದ ಒಂದು ಶಬ್ದ. ಅಲೆಗ್ಜಾಂಡ್ರಿಯದ ಬ್ಯಾಸಿಲೈಡಿಸ್ ಪಂಥದ ಅಧ್ಯಾತ್ಮರಹಸ್ಯಜ್ಞಾನವಾದಿಗಳು (ಉಚ್ಛ್ರಾಯಕಾಲ ಕ್ರಿ.ಶ.120-140) ಇದನ್ನು ದುರದೃಷ್ಟ ಹಾಗೂ ರೋಗಗಳ ವಿರುದ್ಧವಾಗಿ ಉಪಯುಕ್ತ ಶಕ್ತಿಯನ್ನು ಆಹ್ವಾನಿಸಲು ಮಾಂತ್ರಿಕಸೂತ್ರವಾಗಿ ಬಳಸುತ್ತಿದ್ದರು. ಈ ಶಬ್ದವನ್ನು ಮೊದಲು ಸಂಪೂರ್ಣವಾಗಿಯೂ ಬಳಿಕ ಒಂದೊಂದು ಅಕ್ಷರವನ್ನು ಪ್ರತಿಸಾರಿ ಕಡಿಮೆ ಮಾಡುತ್ತಲೂ ಹನ್ನೊಂದು ಬಾರಿ ತ್ರಿಕೋನಾಕಾರದಲ್ಲಿ ಬರೆದು ಈ ಸೂತ್ರವನ್ನು ಸಿದ್ಧಡಿಸಲಾಗುತ್ತಿತ್ತು. ಕ್ಲಿಷ್ಟಸಮಸ್ಯೆಗಳನ್ನು ಹೋಗಲಾಡಿಸಲು ಪ್ರಯತ್ನಿಸುವ ಬಾಹ್ಯವಿಚ್ಛೇದಗಳಿಗೆ ತಿರಸ್ಕಾರಪೂರ್ವಕವಾಗಿ ಈ ಶಬ್ದ ಬಳಕೆಯಲ್ಲಿದೆ.					    
 
(ಜಿ.ಸಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ